{ads}

70 ವರ್ಷದ ನಿವೃತ್ತ ಶಾಲಾ ಶಿಕ್ಷಕನ ಮೇಲೆ ಮನಸೋಇಚ್ಚೆ ಲಾಠಿ ಬೀಸಿದ ಮಹಿಳಾ ಪೊಲೀಸ್ ಪೇದೆಗಳು


ಬಿಹಾರ:-

70 ವರ್ಷದ ನಿವೃತ್ತ ಶಾಲಾ ಶಿಕ್ಷಕರೊಬ್ಬರಿಗೆ ಇಬ್ಬರು ಮಹಿಳಾ ಪೇದೆಗಳು ಕೈಯಲ್ಲಿದ್ದ ಲಾಟಿಯಲ್ಲಿ ಅಮಾನವೀಯವಾಗಿ ಹೊಡೆದಿ ಹೊಡೆದಿರುವ ಘಟನೆ ಬಿಹಾರದಲ್ಲಿ ನಡೆದಿದೆ. ಮಹಿಳಾ ಪೊಲೀಸ್ ಪೇದೆಗಳ ಕೃತ್ಯದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ವಿಡಿಯೋ ನೋಡಿದ ಸಾರ್ವಜನಿಕರು ಪೊಲೀಸರ ನಡತೆಯನ್ನು ಖಂಡಿಸಿದ್ದಾರೆ.

70 ವರ್ಷದ ನಿವೃತ್ತ ಶಾಲಾ ಶಿಕ್ಷಕನಿಗೆ ಪೊಲೀಸರು ಲಾಠಿಯಲ್ಲಿ ಅಮಾನವಿಯಾಗಿ ಹೊಡೆದಿರುವ ವಿಡಿಯೋವನ್ನು ಮುಕೇಶ್ ಸಿಂಗ್ ಎಂಬ ಪತ್ರಕರ್ತರೊಬ್ಬರು ಟ್ವೀಟ್ ಮಾಡಿದ್ದಾರೆ. ನಗರದ ಪ್ರಮುಖ ರಸ್ತೆಯಲ್ಲೇ ಇಬ್ಬರು ಮಹಿಳಾ ಪೊಲೀಸ್ ಪೇದೆಗಳು ನಿವೃತ್ತ ಶಾಲಾ ಶಿಕ್ಷಕನಿಗೆ ಥಳಿಸಿದ್ದಾರೆ. ಆದರೆ ಅಲ್ಲೇ ಹೋರಾಡಿಕೊಂಡಿದ್ದ ಯಾರೊಬ್ಬರೂ ಸಹಾಯಕ್ಕೆ ಬಾರದೆ ಘಟನೆಯನ್ನು ನೋಡಿಕೊಂಡು ಮುಂದೆ ಸಾಗಿದ್ದಾರೆ. ನಿವೃತ್ತ ಶಿಕ್ಷಕ ಬೇಡಿಕೊಂಡರೂ ಮಹಿಳಾ ಪೊಲೀಸ್ ಪೇದೆಗಳು ಮಾತ್ರ ಲಾಟಿಯಲ್ಲಿ ಹೊಡೆದಿದ್ದಾರೆ.

ಈ ವರದಿಯ ಪ್ರಕಾರ ಶಾಲಾ ನಿವೃತ್ತ ಶಿಕ್ಷಕ ಸೈಕಲ್‌ನಲ್ಲಿ ತೆರಳುತ್ತಿದ್ದಾರೆ. ಈ ವೇಳೆ ಆಯಾತಪ್ಪಿ ರಸ್ತೆಯಲ್ಲಿ ಬಿದ್ದಿದ್ದು, ಎದ್ದೇಳಲು ಸ್ವಲ್ಪ ಸಮಯ ತೆಗೆದುಕೊಂಡಿದ್ದಾರೆ. ಈ ಕಾರಣಕ್ಕೆ ಇಬ್ಬರು ಮಹಿಳಾ ಪೊಲೀಸ್ ಪೇದೆಗಳು ನಿವೃತ್ತ ಶಾಲಾ ಶಿಕ್ಷಕರಿಗೆ ಕೊಡುತ್ತಿದ್ದಾರೆ ಎನ್ನಲಾಗಿದೆ.

 ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಪೊಲೀಸ್ ಪೇದೆಗಳನ್ನು ಕರ್ತವ್ಯದಿಂದ ಅಮಾನತು ಮಾಡಬೇಕು ಎಂದು ಬಿಹಾರ ಪೊಲೀಸ್ ಮಹಾನಿರ್ದೇಶಕರಿಗೆ ಟ್ವಿಟರ್ ನಲ್ಲಿ ಒತ್ತಾಯಿಸಲಾಗುತ್ತಿದೆ. ಗೌರವಯುತ ಸ್ಥಾನದಲ್ಲಿರುವ ಒಬ್ಬ ಹಿರಿಯ ನಿವೃತ್ತ ಶಿಕ್ಷಕನನ್ನು ಕಾರಣವಿಲ್ಲದೆ ಹೊಡೆದಿರುವುದು ತಪ್ಪು ಎಂದು ಅನೇಕರು ಕಾಮೆಂಟ್ ಮಾಡಿದ್ದಾರೆ. ಸದ್ಯ ಈ ಘಟನೆಯ ಬಗ್ಗೆ ಮಹಿಳಾ ಪೇದೆಗಳ ಮೇಲೆ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ವರದಿಯಾಗಿದೆ.

ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ

Post a Comment

0 Comments
* Please Don't Spam Here. All the Comments are Reviewed by Admin.