ತೆಲಂಗಾಣ:-
ಕಳಬೇಡ, ಕೂಲಬೇಡ. ಹುಸಿಯ ನುಡಿಯಲು ಬೇಡ, ಎಂದು ಮಕ್ಕಳಿಗೆ ಒಳ್ಳೆಯದನ್ನು ಹೇಳಬೇಕಾಗಿದ್ದ ಮತ್ತು ಸಮಾಜದಲ್ಲಿ ಮಾದರಿಯಾಗಬೇಕಿದ್ದ ಶಾಲಾ ಶಿಕ್ಷಕನೇ ಕಳ್ಳತನ ಪ್ರಕರಣದಲ್ಲಿ ಸಿಕ್ಕಿ ಬಿದ್ದಿರುವ ಘಟನೆ ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯಲ್ಲಿ ನಡೆದಿದೆ.
ತಿಂಗಳಿಗೆ ಸರಿಯಾಗಿ ಕೈ ತುಂಬಾ ಸರ್ಕಾರಿ ಸಂಬಳ ಸಿಕ್ಕರು ಹಣದ ಆಸೆಗೆ ಕಳ್ಳತನಕ್ಕೆ ಇಳಿದ ಖದೀಮ ಶಿಕ್ಷಕ ಇಂದು ಪೊಲೀಸರ ಅತಿಥಿಯಾಗಿದ್ದಾನೆ. ಬಂದಿತ ಶಿಕ್ಷಕನ ಹೆಸರು ಸಾರಾ ಸಂತೋಷ. ಸಂಗಾ ರೆಡ್ಡಿ ಜಿಲ್ಲೆಯ ಎಂಪಿಪಿ ಸರ್ಕಾರಿ ಶಾಲೆಯಲ್ಲಿ ಸಂತೋಷ್ ಶಿಕ್ಷಕರಾಗಿದ್ದರು. ಬ್ಯಾಂಕ್ ನಲ್ಲಿ ಹಣ ಡ್ರಾ ಮಾಡುವ ಜನರನ್ನೇ ಟಾರ್ಗೆಟ್ ಮಾಡುತ್ತಿದ್ದ ಸಂತೋಷ್ ಕಳ್ಳತನ ಮಾಡುತ್ತಿದ್ದ. ಈತ ಬ್ಯಾಂಕ್ ಮುಂದೆ ಹೆಚ್ಚು ಕಾಲ ಕಳೆಯುತ್ತಿದ್ದ ಮತ್ತು ಜನರನ್ನು ಗಮನಿಸಿ ಕೃತ್ಯ ನಡೆಸುತ್ತಿದ್ದ.
10 ನೇ ತಾರೀಕಿನಂದು ಮಧ್ಯಾಹ್ನ ಕೊನ್ಯಾಲಾ ರಾಮುಲು ಎಂಬ ವ್ಯಕ್ತಿ ಸಂಗಾರೆಡ್ಡಿಯ ಎಸ್‌ಬಿಐ ಮುಖ್ಯ ಶಾಖೆಯಿಂದ ಹಣ ಡ್ರಾ ಮಾಡಿಕೊಂಡು ಮನೆಗೆ ಹೋಗುತ್ತಿದ್ದ. ಅವನ ಪತ್ನಿಯೊಂದಿಗೆ ಹೋಗುವಾಗ ತರಕಾರಿ ತೆಗೆದುಕೊಳ್ಳಲೆಂದು ಮಾರ್ಗ ಮಧ್ಯೆ ಪೊಥಿರೆಡ್ಡಿಪಲ್ಲಿಯಲ್ಲಿ ದ್ವಿಚಕ್ರ ವಾಹನವನ್ನು ನಿಲ್ಲಿಸಿದರು. ರಸ್ತೆಯ ಪಕ್ಕದಲ್ಲಿ ರಾಮುಲು ಬೈಕ್ ಪಾರ್ಕ್ ಮಾಡಿದ್ದರು. ಬ್ಯಾಂಕ್ನಿಂದ ಅವರನ್ನೇ ಹಿಂಬಾಲಿಸಿಕೊಂಡು ಬಂದಿದ್ದ ಸಂತೋಷ್ ರಾಮುಲು ಅವರ ಕೈಯಲ್ಲಿ ಇದ್ದ ಬ್ಯಾಗನ್ನು ಕಸಿದು ಪರಾರಿಯಾಗಿದ್ದ. ತಕ್ಷಣವೇ ರಾಮುಲು ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದರು.
ಸಿಸಿಟಿವಿ ದೃಶ್ಯಾವಳಿಯನ್ನು ಆಧರಿಸಿ ಖಾದೀಮ ಸಂತೋಷ್ ನನ್ನು ಗುರುತಿಸಿ ಪೊಲೀಸರು ಬಂಧಿಸಿದ್ದಾರೆ. ಬಳಿಕ ವಿಚಾರಣೆ ನಡೆಸಿದಾಗ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಪೊಲೀಸರು ಆರೋಪಿಯ ಬಳಿ 1.5 ಲಕ್ಷ ರೂಪಾಯಿ ಹಣವನ್ನು ವಶಪಡಿಸಿಕೊಂಡು ರಾಮುಲು ಅವರಿಗೆ ನೀಡಿದರು. ಇನ್ನೂ ಬೇರೆ ಪ್ರಕರಣಗಳಲ್ಲಿ ಸಂತೋಷ್ ಕಳ್ಳತನ ಮಾಡಿರಬಹುದಾ...? ಎಂಬ ಆಯಾಮದಲ್ಲಿ ಪೊಲೀಸರು ತನಿಖೆಯನ್ನು ಮುಂದುವರಿಸಿದಾಗ ಶಾಲಾ ಶಿಕ್ಷಕ ಸಂತೋಷ್ ಬ್ಯಾಂಕ್ ನಲ್ಲಿ ಹಣ ಡ್ರಾ ಮಾಡಿಕೊಂಡು ಹೋಗುವವರನ್ನು ಟಾರ್ಗೆಟ್ ಮಾಡಿ ದೋಚುತ್ತಿದ್ದ ಎಂಬ ಸಂಗತಿ ಬಯಲಾಗಿದೆ.
ಸದ್ಯ ಸಾಲಾ ಶಿಕ್ಷಕ ಸಂತೋಷ್ ವಿರುದ್ಧ ದೂರು ದಾಖಲಿಸಿದ್ದು, ಆತನನ್ನು ಜೈಲಿನಲ್ಲಿ ಬಂಧಿಸಲಾಗಿದೆ. ಈ ಹಿಂದೆ ಮಹಿಳಾ ಉದ್ಯೋಗಿಗೆ ಕಿರುಕುಳ ನೀಡಿದ ಆರೋಪದಲ್ಲಿ ಸಂತೋಷನನ್ನು ಕೆಲಸದಿಂದ ಅಮಾನತು ಮಾಡಲಾಗಿತ್ತು. ಅಂದಿನಿಂದ ಕಳ್ಳತನ ಅಭ್ಯಾಸ ಆರಂಭಿಸಿದ ಎನ್ನಲಾಗಿದೆ. ಇದೀಗ ಸಂತೋಷ್ ಬಂಧನ ಸಂಗಾರೆಡ್ಡಿಯಲ್ಲಿ ಭಾರಿ ಚರ್ಚೆಯಾಗಿದ್ದು ಯಾರನ್ನು ನಂಬುವುದು ಯಾರನ್ನು ಬಿಡುವುದು ಎನ್ನುವಂತಾಗಿದೆ.
ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ
0 Response to ಹೆಚ್ಚು ಬ್ಯಾಂಕ್ ಮುಂದೆಯೇ ಸಮಯ ಕಳೆಯುತ್ತಿದ್ದ ಸರ್ಕಾರಿ ಶಾಲಾ ಶಿಕ್ಷಕರ ಅಸಲಿ ಮುಖವಾಡ ಬಯಲು
Post a Comment