ಸಾಲದ ಆಸೆ ತೋರಿಸಿ ನಕಲಿ ನೋಟು ಚಲಾವಣೆ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ


ಬೆಂಗಳೂರು:-

ಸಾಲದ ಆಸೆಯನ್ನು ತೋರಿಸಿ ನಕಲಿ ನೋಟುಗಳನ್ನು ಚಲಾವಣೆ ಮಾಡುತ್ತಿದ್ದ ಜಾಲವನ್ನು ಭೇದಿಸಿರುವ CCB ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ ಕೋಟ್ಯಾಂತರ ರೂ. ಮೌಲ್ಯದ ನಗಲಿ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ.

ಗುರುವಾರ CCB ಪೊಲೀಸರಿಗೆ ಮೂರು ಆರೋಪಿಗಳು ನಕಲಿ ನೋಟುಗಳನ್ನು ಸಾಗಣೆ ಮಾಡುತ್ತಿದ್ದಾಗ ಸಿಕ್ಕಿ ಬಿದ್ದಿದ್ದಾರೆ. ತಮಿಳುನಾಡಿನ ಪಿಚ್ಛ ಮುತ್ತು, ಸುಬ್ರಮಣ್ಯನ್, ನಲ್ಲಕಣಿ CCB ಇಂದ ಬಂದನಕೊಳಗಾದವರು. ತಮಿಳುನಾಡಿನಲ್ಲಿ ನಕಲಿ ನೋಟುಗಳನ್ನು ಮುದ್ರಣ ಮಾಡಿಕೊಂಡು ಬಸ್ ನಲ್ಲಿ ಬೆಂಗಳೂರಿಗೆ ತರುತ್ತಿದ್ದಾಗ ಪೊಲೀಸರು ದಾಳಿ ಮಾಡಿ ಬಂಧಿಸಿದ್ದಾರೆ.

ಬಂಧಿತ ಆರೋಪಿಗಳಿಂದ 2 ಸಾವಿರ ರೂ. ಮುಖಬೆಲೆಯ 6203 ನೋಟುಗಳು(1,24,06,000 ರೂ.) ಮತ್ತು 500 ಮುಖಬೆಲೆಯ 174(87,000 ರೂ.) ನಕಲಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ತಮಿಳುನಾಡಿನಲ್ಲಿ ನಕಲಿ ನೋಟುಗಳನ್ನು ಮುದ್ರಣ ಮಾಡಿಕೊಂಡು ತಮಿಳುನಾಡಿನಿಂದ ಬಸ್ ನಲ್ಲಿ ಬೆಂಗಳೂರಿಗೆ ಬರುತ್ತಿದ್ದರು. ಈ ಮೂಲಕ ಕರ್ನಾಟಕದಲ್ಲಿ ನಕಲಿ ನೋಟುಗಳನ್ನು ಚಲಾವಣೆ ಮಾಡಲು ವ್ಯವಸ್ಥಿತವಾಗಿ ಸಂಚು ರೂಪಿಸಿದ್ದರು. ಇವರು ಬಸ್ ನಲ್ಲಿ ಬರುತ್ತಿರುವ ಸಂಗತಿ CCB ಪೊಲೀಸರ ಗಮನಕ್ಕೆ ಬಂದಿತು. ಬೆಂಗಳೂರಿಗೆ ಬಂದು ಕಾಲು ಇಡುತ್ತಿದ್ದಂತೆ ಆರೋಪಿಗಳನ್ನು CCB ಪೊಲೀಸರು ಬಲೆಗೆ ಬೀಳಿಸಿದ್ದಾರೆ. ತಿರುನಲ್ ವೇಲಿಯ ಪ್ರಮುಖ ಆರೋಪಿ ಕಣ್ಣಿ ಎಂಬಾತನ ಸೂಚನೆ ಮೇರೆಗೆ ಬೆಂಗಳೂರಿಗೆ ನಕಲಿ ನೋಟುಗಳನ್ನು ತಂದಿರುವುದಾಗಿ ಪಿಚ್ಚು ಮತ್ತು ತಂಡ ಪೊಲೀಸ್ ವಿಚಾರಣೆ ವೇಳೆ ಬಾಯಿಬಿಟ್ಟಿದೆ ಎಂದು ತಿಳಿದುಬಂದಿದೆ.

ಮೇಲಿನ ಮಾಹಿತಿ ನಿಮಗೆ ಇಷ್ಟವಾದಲ್ಲಿ ನಿಮ್ಮ ಸ್ನೇಹಿತರಿಗೆ ದಯಮಾಡಿ ಶೇರ್ ಮಾಡಿ ಧನ್ಯವಾದಗಳು


Post a Comment

Previous Post Next Post

Smartwatch

Random Products