ಮಡಿಕೇರಿ:-
ಅವಳ ಮನೆಗೆ ಆಧಾರವಾಗಿದ್ದ ಹುಡುಗಿ ಯಾಕೆ. ಬೆಂಗಳೂರಿನ ಐಟಿ ಕಂಪನಿಯಲ್ಲಿ ಕೆಲಸ ಕೂಡ ಸಿಕ್ಕಿತ್ತು. ಇನ್ನೂ ಅಪ್ಪ ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳಬೇಕು ಅಂತ ಬೆಂಗಳೂರಿಗೆ ಬರಲು ಎಲ್ಲಾ ತಯಾರಿ ನಡೆಸುತ್ತಿದ್ದ ಆಕೆ ಬಸ್ ಹತ್ತುವ ಇಂದಿನ ರಾತ್ರಿ ತನ್ನ ಮನೆ ಎದುರೆ ಬರ್ಬರವಾಗಿ ಕೊಲೆಯಾಗಿ ಹೋದಳು.
ಫೋನ್ ಕಾಲ್ ಬಂತು ಅಂತ ಫೋನ್ ರಿಸಿವ್ ಮಾಡಲು ಹೊರ ಬಂದವಳು ಮನೆ ಎದುರಲ್ಲೇ ಶವವಾಗಿದಳು. ಇನ್ನೂ ಅವಳ ಸಾವಿನ ಕಾರಣ ಹುಡುಕುತ್ತಾ ಹೊರಟ ಪೊಲೀಸರಿಗೆ ಒಂದೊಂದು ಹಂತದಲ್ಲೂ ಒಂದೊಂದು ಟ್ವಿಸ್ಟ್ ಮತ್ತು ಟರ್ನ್ ಗಳು. ಅಷ್ಟಕ್ಕೂ ಆಕೆಯನ್ನು ಕೊಂದವರು ಯಾರು..? ಅವತ್ತು ರಾತ್ರಿ ಅವಳಿಗೆ ಬಂದ ಫೋನ್ ಕಾಲ್ ಯಾರದ್ದು..?
ಅಂದು ಅವಳಿಗೆ ಫೋನ್ ಮಾಡಿದವನು ರುದ್ರಗುಪ್ಪೆಯ ತಿಮ್ಮಯ್ಯ, ಈತ ಆ ಫ್ಯಾಮಿಲಿಗೆ ಪರಿಚಿತನೇ ಆದರೆ ಅಷ್ಟು ಕ್ಲೋಸ್ ಏನೂ ಇರಲಿಲ್ಲ, ಅಂಥವನು ಅಷ್ಟು ರಾತ್ರಿಯಲ್ಲಿ ಆರತಿಗೆ ಕಾಲ್ ಮಾಡಿದ್ದೇಕೆ..? ಫೋನ್ನಲ್ಲಿ ಆರತಿಗೂ ಆತನಿಗೂ ಏನು ಮಾತುಕತೆ ಆಯ್ತು..? ಫೋನ್ ಮಾಡಿದ ಆತನಿಗೂ ಈ ಕೊಲೆಗೂ ಸಂಬಂಧ ಇದ್ಯಾ ಅನ್ನೋ ಪ್ರಶ್ನೆ ಪೊಲೀಸರಿಗೆ ಮೂಡುತ್ತೆ. ಪೊಲೀಸರು ತಡ ಮಾಡದೆ ಅವನನ್ನೇ ಹುಡುಕಿಕೊಂಡು ಅವನ ಮನೆಗೆ ಹೋದ್ರು, ಅಲ್ಲಿ ನೋಡಿದ್ರೆ ಆತನ ರಕ್ತಸಕ್ತವಾದ ಜ್ಯಾಕೆಟ್ ಮನೆಯ ಬಳಿ ಬಿದ್ದಿದ್ದರೆ... ವಿಷದ ಬಾಟಲ್ ಮನೆ ಮುಂದೆ ಇದ್ದ ಹೊಂಡದ ಪಕ್ಕ ಬಿದ್ದಿತ್ತು.
ಈ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ