ಎತ್ತಿನ ಗಾಡಿ ಸ್ಪರ್ಧೆ ವೇಳೆ ನಡೆದ ಘಟನೆ - ಪ್ರೇಕ್ಷಕನ ಮೇಲೆ ಹರಿದ ಹೆಚ್ಚಿನ ಗಾಡಿ ಸ್ಥಳದಲ್ಲಿ ಒಬ್ಬನ ಸಾವು ಮತ್ತು ಮತ್ತೊಬ್ಬನ ಸ್ಥಿತಿ ಗಂಭೀರ.
ಮಂಡ್ಯದಲ್ಲಿ ಎತ್ತಿನ ಗಾಡಿ ಓಟದ ಸ್ಪರ್ಧೆ ವೀರ ವೇಷದ ಆಟದಲ್ಲೊಂದು ಜೋಡಿ ಎತ್ತಿನ ಗಾಡಿಯ ಮೇಲೆ ಸಾರಥಿ ಕುಳಿತು ಎತ್ತುಗಳನ್ನು ಗುರಿ ಮುಟ್ಟಿಸುವ ಸಲುವಾಗಿ ಹೋರಿಗಳಿಗೆ ಬೇಗ ಓಡುವಂತೆ ಸನ್ನೆ ಮಾಡುತ್ತಿದ್ದಾನೆ. ಎರಡು ಎತ್ತಿನ ಗಾಡಿಗಳನ್ನು ಒಮ್ಮೆಗೆ ಬಿಡಲಾಗುತ್ತಿದೆ. ಈ ವೇಳೆ ಅಂತ್ಯದ ಗೆರೆಯನ್ನು ಯಾವ ಗಾಡಿ ಮೊದಲು ತಲುಪುತ್ತದೆ ಎಂಬುದರ ಆಧಾರದಲ್ಲಿ ಗೆಲುವನ್ನು ನಿರ್ಧರಿಸಲಾಗುತ್ತದೆ. ಈ ರೀತಿ ಆಯೋಜನೆಗೊಂಡಿದ್ದ ಓಟದ ಸ್ಪರ್ಧೆಯಲ್ಲಿ ಅವಘಡ ಸಂಭವಿಸಿದೆ.
ಜೋಡಿ ಎತ್ತಿನಗಾಡಿ ಓಟದ ಸ್ಪರ್ಧೆ ವೀಕ್ಷಣೆಗೆ ಬಂದಿದ್ದ ವ್ಯಕ್ತಿಯ ಮೇಲೆ ಎತ್ತಿನಗಾಡಿ ಹರಿದ ಪರಿಣಾಮ ಸಾವು ಸಂಭವಿಸಿದೆ. ಎತ್ತಿನ ಗಾಡಿ ಓಟದ ಸ್ಪರ್ಧೆಯ ವೀಕ್ಷಣೆಗೆ ಬಂದಿದ್ದ ವ್ಯಕ್ತಿಯ ಮೇಲೆ ಚಕ್ರ ಅರಿತಿದ್ದು ಓರ್ವ ಸಾವನಪ್ಪಿದ್ದು, ಮತ್ತೋರ್ವನಿಗೆ ಗಂಭೀರ ಗಾಯಗಳಾಗಿವೆ. ಮಂಡ್ಯದ ಜಿಲ್ಲೆಯ ಚಿಕ್ಕ ಮಂಡ್ಯ ಗ್ರಾಮದಲ್ಲಿ ಭಾನುವಾರ ಹಳ್ಳಿಕೇಶ್ವರ ಬೀರೇಶ್ವರ ಯುವಕರ ಸಂಘದ ವತಿಯಿಂದ ಎರಡು ದಿನಗಳ ಕಾಲ ಎತ್ತಿನ ಗಾಡಿ ಓಟದ ಸ್ಪರ್ಧೆ ಆಯೋಜನೆ ಮಾಡಲಾಗಿತ್ತು.
ಮಂಡ್ಯದ ಆಸ್ಪತ್ರೆಯಲ್ಲಿ ಚಿಕಿತ್ಸೆ : ಸ್ಪರ್ಧೆ ವೀಕ್ಷಣೆ ಮಾಡಲು ಆಗಮಿಸಿದ್ದ ಕಿಲಾರ ಗ್ರಾಮದ ನಾಗರಾಜು ಮೃತ ದುರ್ದೈವಿ. ಹುಲಿವಾನ ಗ್ರಾಮದ ಮತ್ತೊಬ್ಬ ಯುವಕನ ಸ್ಥಿತಿ ಗಂಭೀರವಾಗಿದ್ದು ಮಂಡ್ಯದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಯುವಕನ ಎದೆ ಮೇಲೆ ಎತ್ತು ಕಾಲಿಟ್ಟಿದ್ದರಿಂದ ಉಸಿರಾಟದ ಸಮಸ್ಯೆ ಆಗಿದೆ ಎಂದು ತಿಳಿದುಬಂದಿದೆ. ಅಂತರ ರಾಜ್ಯ ಸ್ಪರ್ಧೆ ವೀಕ್ಷಣೆಗೆ ಸುಮಾರು 10 ಗ್ರಾಮದ ಗ್ರಾಮಸ್ಥರು ಸಿಕ್ಕಿರಿದು ಸೇರಿದ್ದರು. ಎತ್ತಿನ ಓಟದ ಸ್ಪರ್ಧೆ ನೋಡಲೆಂದು ಗೆಲುವಿನ ಗೆರೆಯ ಮುಂಭಾಗದಲ್ಲಿ ಹಲವರು ಜನ ನಿಂತಿದ್ದರು. ವೇಗವಾಗಿ ಓಡಿಕೊಂಡು ಬಂದ ಎತ್ತುಗಳು ಗೆರೆ ನಂತರವೂ ಮುಂದುವರೆದು ಓಡಿವೆ ಈ ವೇಳೆ ಗುಂಪಾಗಿ ನಿಂತಿದ್ದ ಪ್ರೇಕ್ಷಕರು ಚದುರುವ ಬೇಳೆಗಾಗಲೇ ವೇಗವಾಗಿ ಬಂದ ಹೆಚ್ಚಿನ ಗಾಡಿ ಜನರಿಗೆ ಗುದ್ದಿದೆ.
ಈ ವೇಳೆ ಇಬ್ಬರು ಗಾಡಿಗೆ ಸಿಲುಕಿದ್ದಾರೆ. ಕಿಲಾರ ಗ್ರಾಮದ ನಾಗರಾಜು ಎಂಬುವವರ ಮೇಲೆ ಎತ್ತಿನ ಗಾಡಿ ಹರಿದರಿಂದ ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಎತ್ತುಗಳು ಗುದ್ದಿದ ವೇಳೆ ಕೆಳಗೆ ಬಿದ್ದ ನಾಗರಾಜುವಿನ ಮುಖದ ಮೇಲೆ ಗಾಡಿ ಹರಿದ ಪರಿಣಾಮ ಹೊಲದಲ್ಲಿ ಅವರ ಪ್ರಾಣ ಪಕ್ಷಿ ಹಾರಿದೆ. ಹುಲಿವಾನ ಗ್ರಾಮದ ಮತ್ತೊಬ್ಬ ಯುವಕನ ಎದೆ ಮೇಲೆ ಎತ್ತು ಕಾಲು ಇಟ್ಟಿರುವುದರಿಂದ ಗಾಯಗೊಂಡಿದ್ದಾನೆ. ಶನಿವಾರದಿಂದ ಆರಂಭವಾಗಿದ್ದ ಈ ಸ್ಪರ್ಧೆಯ ಎರಡನೇ ದಿನವಾದ ಭಾನುವಾರ ಈ ದುರಂತ ಸಂಭವಿಸಿದೆ.
ನಿಮಗೆ ಈ ಮಾಹಿತಿ ಇಷ್ಟವಾದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ
0 Response to ಮಂಡ್ಯದಲ್ಲಿ ಪ್ರೇಕ್ಷಕರ ಮೇಲೆ ಹರಿದ ಎತ್ತಿನ ಗಾಡಿ; ಒಬ್ಬನ ಸಾವು ಮತ್ತು ಇನ್ನೊಬ್ಬನ ಸ್ಥಿತಿ ಗಂಭೀರ
Post a Comment