{ads}

ಗೃಹಲಕ್ಷ್ಮೀ ಯೋಜನೆ : ಗೃಹಿಣಿಯರಿಗೆ ಬಿಗ್‌ ರಿಲೀಫ್‌, ಮತ್ತೊಂದು ಗುಡ್‌ನ್ಯೂಸ್‌ ಕೊಟ್ಟ ಸರಕಾರ



ಗೃಹಲಕ್ಷ್ಮೀ ಯೋಜನೆ ಕರ್ನಾಟಕದ ಕಾಂಗ್ರೆಸ್‌ ಸರಕಾರ ಗ್ಯಾರಂಟಿ ಯೋಜನೆಗಳಲ್ಲಿ ಒಂದು. ಕಳೆದ 8 ತಿಂಗಳುಗಳಿಂದಲೂ ಗೃಹಿಣಿಯರು ಈ ಯೋಜನೆಯ ಅಡಿಯಲ್ಲಿ ಪ್ರತೀ ತಿಂಗಳು 2000 ರೂಪಾಯಿ ಹಣ ಬ್ಯಾಂಕ್‌ ಖಾತೆಗೆ ಜಮೆ ಆಗುತ್ತಿದೆ.


ಆದರೆ ಲಕ್ಷಾಂತರ ಮಂದಿಗೆ ಇಂದಿಗೂ ಗೃಹಲಕ್ಷ್ಮೀ ಯೋಜನೆಯ ಹಣ ಸಿಕ್ಕಿಲ್ಲ. ಇಂತವರಿಗೆ ಸರಕಾರದಿಂದ ಇದೀಗ ಗುಡ್‌ನ್ಯೂಸ್‌ ಸಿಕ್ಕಿದೆ.


ಕಾಂಗ್ರೆಸ್‌ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಗೃಹಲಕ್ಷ್ಮೀ ಯೋಜನೆಯ ಅಡಿಯಲ್ಲಿ ಈಗಾಗಲೇ ಮಹಿಳೆಯರ ಖಾತೆಗೆ 16 ಸಾವಿರ ರೂಪಾಯಿ ಹಣ ಜಮೆ ಆಗಿದೆ. ಕಳೆದ ಎಂಟು ತಿಂಗಳ ಅವಧಿಯಿಂದಲೂ ಗೃಹಿಣಿಯರು ಗೃಹಲಕ್ಷ್ಮೀ ಯೋಜನೆಯ ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ. ಇದೀಗ ಯೋಜನೆಗೆ ಸರಕಾರ ಹೆಚ್ಚುವರಿ ಅನುದಾನವನ್ನು ಬಿಡುಗಡೆ ಮಾಡಿದೆ.


ಇಕೆವೈಸಿ, ಆಧಾರ್‌ ಕಾರ್ಡ್‌ ಜೊತೆಗೆ ಪಾನ್‌ ಕಾರ್ಡ್‌ ಲಿಂಕ್‌ ಆಗದೇ ಇರುವವರು, ಆಧಾರ್‌ ಕಾರ್ಡ್‌ ಹಾಗೂ ರೇಷನ್‌ ಕಾರ್ಡ್‌ ಲಿಂಕ್‌ ಆಗದೇ ಇರುವವರು. ಆಧಾರ್‌ ಸೀಡಿಂಗ್‌ ಮಾಡಿಸದೇ ಇರುವವರ ಖಾತೆಗಳಿಗೆ ಇಂದಿಗೂ ಹಣ ಜಮೆ ಆಗಿಲ್ಲ. ಇದೇ ಕಾರಣದಿಂದಲೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಈಗಾಗಲೇ ತಾಂತ್ರಿಕ ಸಮಸ್ಯೆಗಳ ಪರಿಹಾರ ಸಾಕಷ್ಟು ಯೋಜನೆಗಳನ್ನು ರೂಪಿಸಿದೆ.


ತಾಂತ್ರಿಕ ಸಮಸ್ಯೆ ಬಾಕಿ ಉಳಿದವರ ಖಾತೆಗೆ ಹಣ ಜಮೆ ಆಗುವ ಬಗ್ಗೆ ಖಚಿತತೆ ಇಲ್ಲ. ಆದರೆ 6,7 ಮತ್ತು 8 ನೇ ಕಂತು ಬಾಕಿ ಉಳಿದವರ ಖಾತೆಗಳಿಗೆ ಗೃಹಲಕ್ಷ್ಮೀ ಹಣ ವರ್ಗಾವಣೆ ಆಗಲಿದೆ. ಅಷ್ಟೇ ಅಲ್ಲದೇ ಬ್ಯಾಂಕ್‌ ಅಥವಾ ಪೋಸ್ಟ್‌ ಆಫೀಸ್‌ನಲ್ಲಿ ಹೊಸದಾಗಿ ಖಾತೆಯನ್ನು ಮಾಡಿ ಗೃಹಲಕ್ಷ್ಮೀ ಯೋಜನೆಗೆ ಲಿಂಕ್‌ ಮಾಡಿದವರಿಗೂ ಕೂಡ ಹಣ ಸಿಗಲಿದೆ ಎನ್ನಲಾಗುತ್ತಿದೆ.


ರಾಜ್ಯ ಸರಕಾರ ಈಗಾಗಲೇ ಹೆಚ್ಚುವರಿ ಅನುದಾನ ಬಿಡುಗಡೆ ಆಗಲಿದೆ. ಒಂದೊಮ್ಮೆ ಗೃಹಲಕ್ಷ್ಮೀ ಹಣ ವರ್ಗಾವಣೆ ಆಗದೇ ಇರುವವರು ಕೂಡ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಸಹಾಯಕಿಯರ ನೆರವು ಪಡೆಯುವ ಮೂಲಕ ತಾಂತ್ರಿಕ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ.


ಸರಕಾರದ ಕಡೆಯಿಂದ ಲಭ್ಯವಾಗಿರುವ ಮಾಹಿತಿಯ ಪ್ರಕಾರ, ಎಪ್ರಿಲ್‌ 20ರ ಒಳಗಾಗಿ ಗೃಹಲಕ್ಷ್ಮೀ ಯೋಜನೆಯ ಗೃಹಿಣಿಯರಿಗೆ ಬಾಕಿ ಉಳಿದಿರುವ ಎಲ್ಲಾ ಹಣವು ವರ್ಗಾವಣೆ ಆಗಲಿದೆ. ಅಲ್ಲದೇ 8ನೇ ಕಂತಿನ ಹಣ ಕೂಡ ಇದೇ ತಿಂಗಳಲ್ಲಿ ಜಮೆ ಆಗಲಿದೆ ಎನ್ನಲಾಗುತ್ತಿದೆ.



Tags

Post a Comment

0 Comments
* Please Don't Spam Here. All the Comments are Reviewed by Admin.