Ads

Tuesday 25 June 2024

ರಾಜ್ಯದ ಸರ್ಕಾರಿ ನೌಕರರೇ ಗಮನಿಸಿ, ಇಲ್ಲಿದೆ ʻನಿವೃತ್ತಿ ವೇತನʼದ ಕುರಿತು ಸಂಪೂರ್ಣ ಮಾಹಿತಿ

Admin       Tuesday 25 June 2024



ಕನ್ನಡ ನ್ಯೂಸ್-24

ರಾಜ್ಯದ ಸರ್ಕಾರಿ ನೌಕರರ ಗಮನಕ್ಕೆ ನಿವೃತ್ತಿ ವೇತನ ನಿಯಮಗಳನ್ನು ಕುರಿತು ಕರ್ನಾಟಕ ನಾಗರೀಕ ಸೇವಾ ನಿಯಮಗಳು- 1958 ರ ಭಾಗ-4 ರಲ್ಲಿ ಪ್ರಸ್ತಾಪಿಸಿರುವ ಕೆಲವು ಮಾಹಿತಿಗಳು ನಮ್ಮ ಓದುಗಾರಿಗಾಗಿ ಇಲ್ಲಿದೆ ಮಾಹಿತಿ.

ನಿವೃತ್ತಿಯ ಅವಶ್ಯಕತೆ:

  • ಸಾಮಾನ್ಯ ಜನರಂತೆ ಸರ್ಕಾರಿ ನೌಕರರು ಕೂಡ ಶಕ್ತಿಯಿರುವ ವರೆಗೆ ದುಡಿಯುತ್ತಾರೆ.
  • ವಯಸ್ಸು ಆದಂತೆ ಕರ್ತವ್ಯ ದಕ್ಷತೆ ಕಡಿಮೆಯಾಗುತ್ತದೆ
  • ಆರಂಭದಲ್ಲಿ ಇದ್ದ ಹುರುಪು ಉತ್ಸಾಹ ಇರುವುದಿಲ್ಲ
  • ಇದರಿಂದ ಸಾರ್ವಜನಿಕರ ಕೆಲಸಗಳು ವಿಳಂಬಿಸುತ್ತವೆ
  • ಹೊಸತಲೆಮಾರಿಗೆ ಉದ್ಯೋಗದ ಅವಶ್ಯಕತೆ
  • ಅದಕ್ಕಾಗಿ ನಿವೃತ್ತಿ ಅನಿವಾರ್ಯವಾಗುತ್ತದೆ


ನಿವೃತ್ತಿ ವಯಸ್ಸು

  • ಯಾವ ವಯಸ್ಸಿಗೆ ನಿವೃತ್ತಿಯಾಗಬೇಕು
  • ನಿವೃತ್ತಿಯ ವಯಸ್ಸು ಆಯಾ ದೇಶಗಳ ವಾತವರಣವನ್ನು ಹಾಗೂ ಜೀವಿತಾವಧಿಯನ್ನು ಅವಲಂಬಿಸಿರುತ್ತದೆ
  •  ಉಸಾ ನಲ್ಲಿ ಜೀವಿತಾವಧಿ ವಯಸ್ಸು 65-70
  • ಬ್ರಿಟನ್ ನಲ್ಲಿ ಜೀವಿತಾವಧಿ ವಯಸ್ಸು 60-65
  • ಭಾರತದಲ್ಲಿ ಜೀವಿತಾವಧಿ ವಯಸ್ಸು 55-60


ನಿವೃತ್ತಿ ಸೌಲಭ್ಯಗಳ ಸಿದ್ದಾಂತಗಳು

  • ಪ್ರತಿಯೊಂದು ದೇಶದಲ್ಲೂ ಕೂಡ ಸರ್ಕಾರಿ ಸೇವೆಯಿಂದ ನಿವೃತ್ತರಾದವರಿಗೆ ಅವರ ಇಳಿವಯಸ್ಸಿನಲ್ಲಿ ಪರಿಹಾರವಾಗಿ ಮಾಸಿಕ ಮೊಬಲಗು ಅಥವಾ ಹಿಡಿಗಂಟಾಗಿ ಹಣವನ್ನು ಪಾವತಿದಲಾಗುತ್ತಿದೆ
  • ಇದಕ್ಕಾಗಿ ಅಯವ್ಯಯದಲ್ಲಿ ಸರ್ಕಾರ ಹಣವನ್ನು ಕಾಯ್ದಿರಿಸುತ್ತದೆ
  • ಈ ರೀತಿಯ ಉಪಲಬ್ದಗಳು ಪಾವತಿಸದಿದ್ದರೆ ಏನಾಗುತ್ತಿತ್ತು

1. ನೌಕರನು ಸಾಯುವತನಕ ವಿರಾಮವಿಲ್ಲದೆ ದುಡಿಯಬೇಕಿತ್ತು

2. ವಯಸ್ಸಾದ ನೌಕರರ ಸಂಖ್ಯೆ ಹೆಚ್ಚಳವಾಗಿ ಆಡಳಿತ ದುರ್ಬಲವಾಗುತ್ತಿದೆ


ನಿವೃತ್ತಿ ಸೌಲಭ್ಯಗಳ ಸಿದ್ದಾಂತಗಳು

  • ಉಪಲಬ್ದಗಳಿಲ್ಲದೆ ನಿವೃತ್ತಿಗೊಳಿಸಿದರೆ ನೌಕರನು ನಿರ್ಗತಿಕನಾಗುತ್ತಿದ್ದ
  • ನೌಕರನ ಜೀವನ ಕಷ್ಟಕರವಾಗುತಿತ್ತು
  • ಯಾರೂ ಸರ್ಕಾರಿ ನೌಕರಿಯನ್ನು ಬಯಸುತ್ತಿರಲಿಲ್ಲ ಸರ್ಕಾರಿ ನೌಕರಿಗೆ ಘನತೆ ಇರುತ್ತಿರಲಿಲ್ಲ ನೌಕರರು ಹತಾಷರಾಗಿ ಲಂಚಕೋರರಾಗುತಿದ್ದರು
  • ಸೇವೆಯಲ್ಲಿ ಇರುವ ತನಕ ದೋಚುತ್ತಿದ್ದರು
  • ನಿವೃತ್ತಿ ವೇತನ ಸೌಲಭ್ಯಗಳನ್ನು ಎರಡು ಭಾಗಗಳನ್ನಾಗಿ ಮಾಡಿದೆ

1.ನಿವೃತ್ತಿಯಾದಾಗ ದೊರೆಯುವ ಉಪಲಬ್ದಗಳು

2.ಸೇವೆಯಲ್ಲಿ ಮರಣ ಹೊಂದಿದಾಗ ದೊರೆಯುವ ಉಪಲಬ್ದಗಳು


ನಿವೃತ್ತಿಯಾದಾಗ ದೊರೆಯುವ ಉಪಲಬ್ದಗಳು

  • ನಿವೃತ್ತಿ ವೇತನ
  • ಸೇವಾ ಉಪದಾನ
  • ಪರಿವರ್ತಿತ ಪಿಂಚಣಿ
  • ಸೇವಾಂತ್ಯದಲ್ಲಿ ಉಳಿದಿರುವ ಗಳಿಕೆರಜೆ ನಗದೀಕರಣ ಸೌಲಭ್ಯ [118 ಎ]
  • ಸಾಮೂಹಿಕ ವಿಮಾ ಯೋಜನೆ ಉಳಿತಾಯ ನಿಧಿ ಮೊತ್ತ
  • ಸಾಮಾನ್ಯ ಭವಿಷ್ಯ ನಿಧಿ ಮೊತ್ತ
  • ನಿವೃತ್ತಿ ಸ್ಥಳಕ್ಕೆ ಪ್ರಯಾಣ ಮಾಡಿದಾಗ ಉಂಟಾಗುವ ವೆಚ್ಚಗಳು [548ಎ]


ಸೇವೆಯಲ್ಲಿ ಮರಣ ಹೊಂದಿದಾಗ ದೊರೆಯುವ ಉಪಲಬ್ದಗಳು

  • ಕುಟುಂಬ ನಿವೃತ್ತಿ ವೇತನ
  • ಮರಣ ಉಪದಾನ
  • ಮರಣ ಹೊಂದಿದ ದಿನದಂದು ಉಳಿದಿರುವ ಗಳಿಕೆರಜೆ ನಗದೀಕರಣ ಸೌಲಭ್ಯ
  • ಸಾಮೂಹಿಕ ವಿಮಾ ಯೋಜನೆ ವಿಮಾನಿಧಿ & ಉಳಿತಾಯ ಮೊತ್ತ
  • ಸಾಮಾನ್ಯ ಭವಿಷ್ಯ ನಿಧಿ ಮೊತ್ತ
  • ಸ್ವಗ್ರಾಮಕ್ಕೆ ಪ್ರಯಾಣ ಮಾಡಿದಾಗ ಉಂಟಾಗುವ ವೆಚ್ಚಗಳು


ಸಾಮಾನ್ಯ ನಿವೃತ್ತಿ ವೇತನ ನಿಯಮಗಳು: 

  • ನಿವೃತ್ತಿ ವೇತನ ಎಂದರೆ ನಿವೃತ್ತಿ ವೇತನ ಹಾಗೂ ಸೇವಾ ಉಪದಾನ ಸೇರಿರುತ್ತದೆ. [208]
  • ನಿವೃತ್ತಿ ವೇತನವನ್ನು ಮಂಜೂರು ಮಾಡುವ ಸಕ್ಷಮ ಪ್ರಾಧಿಕಾರಿ ಕಚೇರಿ ಮುಖ್ಯಸ್ಥರಾಗಿರುತ್ತಾರೆ [209]
  • ನಿವೃತ್ತಿ ವೇತನ ಪಡೆಯಲು ಸರ್ಕಾರಿ ನೌಕರ ಒಳ್ಳೆಯ ನಡತೆಯನ್ನು ಹೊಂದಿರಬೇಕು
  • ನಿವೃತ್ತಿ ವೇತನ ಪಡೆಯುವ ನೌಕರನು ಅಪರಾಧಿ ಅಥವಾ ತಪ್ಪಿತಸ್ಥನೆಂದು ತಿಳಿದು ಬಂದರೆ ನಿವೃತ್ತಿ ವೇತನವನ್ನು ತಡೆಯಿಡಿಯಬಹುದು ಅಥವಾ ಭಾಗಶಃ ಅಥವಾ ಸಂಪೂರ್ಣ ಹಿಂತೆಗೆದುಕೊಳ್ಳಬಹುದು. [213]
  • ದುರ್ವತ್ರನೆಗಾಗಿ ಅಥವಾ ನಿರ್ಲಕ್ಷ್ಯಕ್ಕಾಗಿ ನಿವೃತ್ತ ವೇತನವನ್ನು ತಡೆಯಿಡಿಯಬಹುದು [214]
  • ಕಡ್ಡಾಯ ನಿವೃತ್ತಿ ವಯಸ್ಸನ್ನು ತಲುಪಿ ಅಥವ ನಿವೃತ್ತಿ ದಿನಾಂಕದಂದು ಅಮಾನತ್ತು ಆದರೆ ಅವರಿಗೆ ತಾರ್ತ್ತೂತಿಕ ಪಿಂಚಣಿ ಮಂಜೂರು ಮಾಡಬೇಕು


ನಿವೃತ್ತಿ ವೇತನ ಪಾವತಿ ಸಿದ್ದಾಂತ

  • ಆದರೆ ಮೇಲೆ ಪ್ರಸ್ತಾಪಿಸಿದ ಸಿದ್ದಾಂತಗಳು ಆಯಾ ರಾಷ್ಟ್ರದ ಸಂವಿಧಾನದ ಆಧಾರದ ಮೇಲೆ • ಬಗೆಹರಿಸಲ್ಪಡುತ್ತವೆ.
  • ಕೆಲವೊಂದು ರಾಷ್ಟ್ರಗಳಲ್ಲಿ ಪಿಂಚಣಿಯನ್ನು ಹಕ್ಕೆಂದು ನ್ಯಾಯಲಯಗಳಲ್ಲಿ ಪ್ರತಿಪಾದಿಸಲಾಗುತ್ತಿದ
  • ನಮ್ಮ ದೇಶದಲ್ಲಿ ಅನುಮೋದಿತ ಸರ್ಕಾರಿ ಸೇವೆಗೆ ಪಿಂಚಣಿ ನೀಡುವ ಕುರಿತು ಸರ್ಕಾರ ತನ್ನ ಆಧಿಕಾರವನ್ನು ಕಾಯ್ದಿರಿಸಿಕೊಂಡಿದೆ


ಕುಟುಂಬ ಪಿಂಚಣಿ:

ಕುಟುಂಬ ಎಂದರೆ ಸರ್ಕಾರಿ ನೌಕರನ ಕೆಳಕಂಡ ಸಂಬಂಧಿಗಳು

  • ಪತ್ನಿ ಅಥವಾ ಪತಿ
  • 18 ವರ್ಷ ವಯಸ್ಸು ತುಂಬಿರದ ಮಗ
  • 21 ವರ್ಷ ವಯಸ್ಸು ತುಂಬಿರದ ಮಗಳು
  • ನಿವೃತ್ತಿ ದಿನಾಂಕಕ್ಕೆ ಮುಂಚೆ ಕಾನೂನು ಪ್ರಕಾರ ದತ್ತು ತೆಗೆದುಕೊಂಡಿರುವ ಮಗ ಮತ್ತು ಮಗಳು
  • ಅರ್ಹತಾದಾಯಕ ಸೇವೆ:ನಿ-220-243
  • ಸರ್ಕಾರಿ ಸೇವೆಯನ್ನು ಸಲ್ಲಿಸಿರಬೇಕು
  • ಖಾಯಂ ನೌಕರನಾಗಿರಬೇಕು
  • ಸಲ್ಲಿಸಿದ ಸೇವೆಗೆ ಸರ್ಕಾರ ಹಣ ಪಾವತಿಸಿರಬೇಕು
  • ವಿವಿಧ ರಜೆಗಳ ಮೇಲೆ ಸಂಬಳ ಪಡೆದು ಕಳೆದ ಕಾಲವನ್ನು ಸೇವೆಯೆಂದು ಪರಿಗಣಿಸಬೇಕು [244]
  • ಇತ್ಯರ್ಥವಾಗದ ರಜೆ ಮೀರಿದ ಅವಧಿ, ಸೇರುವಿಕೆ ಕಾಲ, ಅಮಾನತ್ತಿನ ಅವಧಿ ಅನಧಿಕೃತ ಗೈರುಹಾಜರಿ ಇವುಗಳನ್ನು ಅಸಾಧಾರಣ ರಜೆಯೆಂದು ಪರಿಗಣಿಸಿ 3 ವರ್ಷ ಮೀರಿದ ಅವಧಿಯನ್ನು ಅರ್ಹತಾದಾಯಕ ಸೇವೆಯಿಂದ ಕಡಿತಮಾಡಬೇಕು


ನಿವೃತ್ತಿ ವೇತನ ಪಾವತಿ ಸಿದ್ದಾಂತ

  • ಆದರೆ ಮೇಲೆ ಪ್ರಸ್ತಾಪಿಸಿದ ಸಿದ್ದಾಂತಗಳು ಆಯಾ ರಾಷ್ಟ್ರದ ಸಂವಿಧಾನದ ಆಧಾರದ ಮೇಲೆ ಬಗೆಹರಿಸಲ್ಪಡುತ್ತವೆ.
  • ಕೆಲವೊಂದು ರಾಷ್ಟ್ರಗಳಲ್ಲಿ ಪಿಂಚಣಿಯನ್ನು ಹಕ್ಕೆಂದು ನ್ಯಾಯಲಯಗಳಲ್ಲಿ ಪ್ರತಿಪಾದಿಸಲಾಗುತ್ತಿದ
  • ನಮ್ಮ ದೇಶದಲ್ಲಿ ಅನುಮೋದಿತ ಸರ್ಕಾರಿ ಸೇವೆಗೆ ಪಿಂಚಣಿ ನೀಡುವ ಕುರಿತು ಸರ್ಕಾರ ತನ್ನ ಆಧಿಕಾರವನ್ನು ಕಾಯ್ದಿರಿಸಿಕೊಂಡಿದೆ
  • ಅರ್ಹತಾದಾಯಕ ಸೇವೆಯಲ್ಲಿ ಕಡಿತ ಮತ್ತು ಸೇರ್ಪಡೆ
  • ವಿವಿಧ ತರಬೇತಿಗಳಲ್ಲಿ ಕಳೆದ ಅವಧಿಯನ್ನು ಅರ್ಹತಾದಾಯಕ ಸೇವೆಗೆ ಪರಿಗಣಿಸಬೇಕು [246]
  • ಅಮಾನತ್ತಿನ ಅವಧಿಯನ್ನು ಅಮಾನತ್ತು ಎಂದು ಪರಿಗಣಿಸಿದ್ದಲ್ಲಿ ಅದನ್ನು ಅರ್ಹತಾದಾಯಕ ಸೇವೆಯಿಂದ ಕಡಿತಗೊಳಿಸಬೇಕು [250]
  • ರಾಜೀನಾಮೆ, ಸೇವೆಯಿಂದ ವಜಾ ಮತ್ತು ತೆಗೆದು ಹಾಕಿರುವ ಅವಧಿ ಗಳನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳುತ್ತದೆ
  • ಅವಧಿ ಗಳನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳುತ್ತದೆ
  • ಮುನ್ಸಿಫ್ ಹುದ್ದೆಗೆ ನೇಮಕಗೊಂಡಾಗ 25 ವರ್ಷ ವಯಸ್ಸು ಮೀರಿದ್ದಾಗ ನೇಮಕವಾಗಿದ್ದರೆ ಗರಿಷ್ಟ 5 ವರ್ಷವನ್ನು ಅರ್ಹತಾದಾಯಕ ಸೇವೆಗೆ ಸೇರಿಸಬೇಕು [247[1]


ಕುಟುಂಬ ಪಿಂಚಣಿ ಪಾವತಿ ಕಾರ್ಯವಿಧಾನ

  • ಅವಳಿ ಮಕ್ಕಳಿಗೆ ಕುಟುಂಬ ಪಿಂಚಣಿ ಸಂದಾಯ ಮಾಡಬೇಕಾದಲ್ಲಿ ಅದನ್ನು ಸಮವಾಗಿ ಪ್ರತಿಯೊಂದು ಮಗುವಿಗೂ ಹಂಚಬೇಕು
  • ಸರ್ಕಾರಿ ನೌಕರನು ಸರ್ಕಾರಿ ಸೇವೆಗೆ ಸೇರಿದ ತಕ್ಷಣ ತನ್ನ ಕುಟುಂಬದ ವಿವರಗಳನ್ನು ನಮೂನೆ -ಎ ನಲ್ಲಿ ನೀಡಬೇಕು
  • ಸೇವೆಗೆ ಸೇರುವಾಗ ಕುಟುಂಬವಿಲ್ಲದಿದ್ದರೆ ಮದುವೆಯಾದ ತಕ್ಷಣ ವಿವರಗಳ ಸಲ್ಲಿಸಬೇಕು
  • ಮಾನಸಿಕ, ದೈಹಿಕ, ವಿಕಲತೆಯ ಮಕ್ಕಳಿದ್ದರೆ ಅದರ ವಿವರವನ್ನು ವೈದ್ಯಾಧಿಕಾರಿಗಳ ದೃಢೀಕರಣವನ್ನು ನಮೂನೆ-ಇ ನಲ್ಲಿ ಪಡೆದು ಸೇವಾವಹಿಗೆ ಲಗತ್ತಿಸಬೇಕು


ನಿವೃತ್ತಿಯ ನಂತರ ವಿವಾಹ:

  • ನಿವೃತ್ತಿ ನಂತರ ಮದುವೆ ಮತ್ತು ಜನಿಸಿದ ಮಕ್ಕಳ ಕುರಿತು ನಮೂನೆ- ಎಫ್ ನಲ್ಲಿ ಮಾಹಿತಿಯನ್ನು ಕಚೇರಿ ಮುಖ್ಯಸ್ಥರಿಗೆ ತಿಳಿಸಬೇಕು
  • ಇದರ ಜೊತೆ ಮದುವೆಯಾದ ಪ್ರಮಾಣ ಪತ್ರಗಳು ಜೋಡಿ ಭಾವ ಚಿತ್ರಗಳನ್ನು ಲಗತ್ತಿಸಿರಬೇಕು
  • ಕಚೇರಿ ಮುಖ್ಯಸ್ಥರು ಈ ಕುರಿತು ಮಾಹಾಲೇಖಪಾಲರಿಗೆ ಮಾಹಿತಿ ನೀಡಬೇಕು
  • ನಿವೃತ್ತಿ ಸಂದಾಯ ಆದೇಶದಲ್ಲಿ ತಿದ್ದುಪಡಿಗಳನ್ನು ಮಹಾಲೇಖಪಾಲರು ನಮೂದು ಮಾಡಿಕೊಂಡು ಹೊಸ ಸಂದಾಯ ಆದೇಶ ನೀಡುತ್ತಾರೆ.

ಕನ್ನಡ ನ್ಯೂಸ್-24

logoblog

Thanks for reading ರಾಜ್ಯದ ಸರ್ಕಾರಿ ನೌಕರರೇ ಗಮನಿಸಿ, ಇಲ್ಲಿದೆ ʻನಿವೃತ್ತಿ ವೇತನʼದ ಕುರಿತು ಸಂಪೂರ್ಣ ಮಾಹಿತಿ

Previous
« Prev Post

No comments:

Post a Comment