ಬೆಂಗಳೂರು:-
ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಅಧ್ಯಕ್ಷ ಸಿ.ಎಸ್ ಷಡಕ್ಷರಿ ಅವರ ನೇತೃತ್ವದಲ್ಲಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಚರ್ಚೆಯನ್ನು ಮಾಡಲಾಯಿತು, ಹೌದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ರಾಜ್ಯದ ಅಧ್ಯಕ್ಷರಾದ ಷಡಕ್ಷರಿ ಯವರು ರಾಜ್ಯದ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಹಲವು ವಿಚಾರಗಳ ಬಗ್ಗೆ ಚರ್ಚಿಸಿದರು.
ಬೆಂಗಳೂರು ನಗರ ರಾಜ್ಯಪರಿಷತ್ ಸದಸ್ಯರು ಮತ್ತು ತಾಲೂಕು, ಜಿಲ್ಲಾ ಶಾಖೆಗಳ ಚುನಾಯಿತ ನಿರ್ದೇಶಕ ಪ್ರಾದಾಧಿಕಾರಿಗಳ ಸಮಾವೇಶದಲ್ಲಿ ವರ್ಚುವಲ್ ಮೂಲಕ ಸಂಘದ ಮುಖ್ಯ ಬೇಡಿಕೆಗಳಾದ NPS ರದ್ದತಿ ಹಾಗೂ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯ ಶೀಘ್ರ ಜಾರಿಯಾಗಿ ಕೈಗೊಂಡಿರುವ ಸರ್ಕಾರದ ಕ್ರಮಗಳ ಕುರಿತು ಮತ್ತು ಸಂಘದ ಚಟುವಟಿಕೆಗಳು ಹಾಗೂ ಪ್ರಯತ್ನಗಳ ಕುರಿತು ಮಾತನಾಡಿದ ಹಿನ್ನೆಲೆಯಲ್ಲಿ ಸಂಘದ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು.
ಸಮಾವೇಶದಲ್ಲಿ ವರ್ಚುವೇಲ್ ಮೂಲಕ ತಾವುಗಳು ಮಾತನಾಡಿ ನಮ್ಮ ಸಂಘದ ಪದಾಧಿಕಾರಿಗಳು ಮತ್ತು ನೌಕರರಲ್ಲಿ ಆತ್ಮವಿಶ್ವಾಸವನ್ನು ಮೂಡಿಸಿದ್ದೀರಿ ಹಾಗೂ ನೌಕರರ ಸಂಘದ ಮುಖ್ಯ ಬೇಡಿಕೆಗಳಾದ NPS ರದ್ಧತಿ ಹಾಗೂ ಕರ್ನಾಟಕ ರಾಜ್ಯ ಆರೋಗ್ಯ ಸಂಜೀವಿನಿ ಯೋಚನೆಯನ್ನು ಶೀಘ್ರ ಜಾರಿಗೊಳಿಸಲು ಮುಖ್ಯಮಂತ್ರಿ ಅವರಿಗೆ ಸರ್ಕಾರಿ ನೌಕರರ ರಾಜ್ಯ ಅಧ್ಯಕ್ಷರಾದ ಸಿ.ಎಸ್ ಷಡಕ್ಷರಿ ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ನಿವೃತ್ತ ನೌಕರರ ಸಂಘದ ಅಧ್ಯಕ್ಷರಾದ ಬೈರಪ್ಪನವರು ಹಾಗೂ ನೌಕರರ ಸಂಘದ ಸದಸ್ಯರು ಹಾಜರಿದ್ದರು.
ಕನ್ನಡ ನ್ಯೂಸ್ 24 ಗೆ ಭೇಟಿ ನೀಡಿದ್ದಕ್ಕೆ ಧನ್ಯವಾದಗಳು
0 Response to ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾದ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್ ಷಡಕ್ಷರಿ
Post a Comment